ಮತಿಘಟ್ಟ ಕೃಷ್ಣಮೂರ್ತಿ - ಹಿರಿಯ ಸ್ವಾತಂತ್ರ್ಯ ಹೋರಾಟಗಾರರು. ಅನೇಕ ಜಾನಪದ ಗೀತೆಗಳನ್ನು ಸಂಗ್ರಹಿಸಿದವರು. ಇವರು ಹಾಸನ ಜಿಲ್ಲೆಯ ಮತಿಘಟ್ಟ ಎಂಬ ಊರಿನಲ್ಲಿ ಜುಲೈ ೧೨,೧೯೧೨ರಂದು ಜನಿಸಿದರು. ೫೦ಸಾವಿರಕ್ಕೂ ಅಧಿಕ ಜಾನಪದ ಹಾಡು ಮತ್ತು ಕತೆಗಳನ್ನು ಸಂಗ್ರಹಿಸಿದ್ದರು. ಭಾಷಾಲೋಕ ಖ್ಯಾತಿಯ ಪ್ರಕೃತಿ ಬನವಾಸಿ ಕೃಷ್ಣಮೂರ್ತಿ ಅವರ ಮೊಮ್ಮಗ. == ಪತ್ರಿಕೋದ್ಯಮ == ೧೯೪೦ರಲ್ಲಿ ಮಯೂರ ಮಾಸಪತ್ರಿಕೆಯನ್ನು ಪ್ರಾರಂಭಿಸಿ, ೧೦ ತಿಂಗಳ ಕಾಲ ನಡೆಸಿದರು.ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ ಕೆಲಕಾಲ ಜೈಲಿನಲ್ಲಿದ್ದರು.೧೯೪೧ರ ನಂತರ ತಾಯಿನಾಡು,ಕೈಲಾಸ,ಕನ್ನಡಪ್ರಭ ಮೊದಲಾದ ಪತ್ರಿಕೆಗಳಲ್ಲಿ ಕೆಲಸ ಮಾಡಿ,೧೯೪೫ರಲ್ಲಿ ನಿವೃತ್ತಿ ಹೊಂದಿದರು. == ಕೃತಿಗಳು == ನಾಡ ಪದಗಳು ಕಳಸಾಪುರದ ಹುಡುಗರು - ಚಲನಚಿತ್ರವಾಗಿರುವ ಕಾದಂಬರಿ. ಗೃಹಿಣಿ ಗೀತೆ ಸಾಂಪ್ರದಾಯಿಕ ಗೀತೆಗಳು ಶಕುನದ ಹಕ್ಕಿ, ಹೊನ್ನ ಹೊತ್ತಿಗೆ ಮರುಗಿ ಗಂಡನ ಪೂಜೆ - ನಾಟಕ ಹೊಂಬಾಳೆ - ನಾಟಕ ನಮ್ಮ ಹಳ್ಳಿಯ ಹಾಡು ಸರ್ವೋದಯ ಪಚ್ಚೆತೆನೆ - ಸಣ್ಣ ಕತೆಗಳ ಸಂಕಲನ ಝೇಂಕಾರ , ಉಯ್ಯಾಲೆ - ಜನಪದ ಗೀತೆಗಳ ಧ್ವನಿಸುರುಳಿಗಳು. == ಪ್ರಶಸ್ತಿ, ಸನ್ಮಾನಗಳು == ಜಾನಪದ ರತ್ನ , ಜಾನಪದ ತಜ್ಞ , ಜಾನಪದ ಭೀಷ್ಮ ಹಾಸನ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಜೀವಮಾನ ಸಾಧನೆಗಾಗಿ ಕರ್ನಾಟಕ ರಾಜ್ಯ ಸರ್ಕಾರ ರಾಜ್ಯ ಪ್ರಶಸ್ತಿ ನೀಡಿ,ಗೌರವಿಸಿದೆ. == ನಿಧನ == ಅನಾರೋಗ್ಯದ ಕಾರಣದಿಂದ ಕೃಷ್ಣಮೂರ್ತಿಯವರು ಜುಲೈ ೨೭,೨೦೦೬ರ ಗುರುವಾರದಂದು ಬೆಂಗಳೂರಿನಲ್ಲಿ, ತಮ್ಮ ೯೪ರ ವಯಸ್ಸಿನಲ್ಲಿ, ನಿಧನರಾದರು.